ಪೋಲಿಸರು, ವೈದ್ಯರ ಹತ್ಯೆಗೆ ಮೊದಲೇ ಹೊಂಚು ಹಾಕಿ ಕುಳಿತಿತ್ತಂತೆ ಮತಾಂಧರ ತಂಡ, ಹಲ್ಲೆಗೊಳಗಾದ ಪೋಲೀಸ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ, ವೀಡಿಯೋ ನೋಡಿ

ಪಾದರಾಯನಪುರ ಗಲಭೆಯ ಸ್ಪೋಟಕ ಮಾಹಿತಿ ಇದೀಗ ಪೋಲೀಸ್ FIR ನಲ್ಲಿ ಬಯಲಾಗಿದೆ. ನಿನ್ನೆ ರಾತ್ರಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲು ಹೋದ ಪೋಲೀಸರು ವೈದ್ಯರ ಮೇಲೆ ಪುಂಡರು ದಾಳಿ ನಡೆಸಿದ್ದರು.

ಪೋಲೀಸ್ ಚೌಕಿಯನ್ನು ಕಿತ್ತೆಸಿದು, ಸೀಲ್-ಡೌನ್ ಗಾಗಿ ಹಾಕಿದ್ದ ಕೃತಕ ತಡೆಗೋಡೆಗಳನ್ನು ಧ್ವಂಸ ಮಾಡಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸ್ ಅಧಿಕಾರಿಯೊಬ್ಬರಿಗೆ ಮ'ತಾಂಧರು ಸಮವಸ್ತ್ರ ಹರಿಯೋ ಮಟ್ಟಕ್ಕೆ ಥಳಿಸಿದ್ದಾರೆ. ಇದೀಗ ಆ ಪೋಲೀಸ್ ಅಧಿಕಾರಿ ಘಟನೆಯ ಸಂಪೂರ್ಣ ಮಾಹಿತಿ FIR ನಲ್ಲಿ ಹೊರಹಾಕಿದ್ದಾರೆ.

ಭಾನುವಾರ ಪಾದರಾಯನಪುರದಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಕೃತ್ಯ ಎಂಬುದು ಇದೀಗ ಬಯಲಾಗಿದೆ. ಪೋಲೀಸರು, ವೈದ್ಯರು ಸ್ಥಳಕ್ಕೆ ಬರುತ್ತಿದ್ದಾರೆ ಎಂಬುದು ಮೊದಲೇ ಗೂಂಡಾಗಳಿಗೆ ತಿಳಿದಿತ್ತು. ಪೋಲೀಸರು, ವೈದ್ಯರ ಮೇಲೆ ದಾಳಿ ನಡೆಸಲು ನಾಲ್ಕು ತಂಡಗಳಾಗಿ ಗೂಂಡಾಗಳು ಸ್ಥಳಕ್ಕೆ ಆಗಮಿಸಿದ್ದರು.

ಮೊದಲು ಬೀದಿದೀಪಗಳನ್ನು ಒಡೆದು ಹಾಕಿದ ತಂಡ ನಂತರ ಸ್ಥಳದಲ್ಲಿದ್ದ ಪೋಲೀಸ್ ಚೌಕಿಯನ್ನು ಧ್ವಂಸ ಮಾಡಿದ್ದಾರೆ. ಅಲ್ಲಿದ್ದ ಪೋಲೀಸರು ತಡೆಯಲು ಯತ್ನಿಸಿದಾಗ ಪೋಲೀಸರು, ವೈದ್ಯಕೀಯ ತಂಡದ ಮೇಲೆ ದಾಳಿ ನಡೆಸಿದ್ದಾರೆ.

'ಯಾರನ್ನೂ ಬಿಡಬೇಡಿ, ಕೊಂದು ಹಾಕಿ' ಎಂದು ತಂಡದಲ್ಲಿದ್ದ ಅನೇಕರು ಕೂಗಾಡುತ್ತಿದ್ದರು ಎಂದು ತಿಳಿದುಬಂದಿದೆ. ಪೋಲೀಸರು, ವೈದ್ಯರ ಹತ್ಯೆಗೆ ಗುಂಪು ಮೊದಲೇ ಸಿದ್ದವಾಗಿ ಬಂದಿತ್ತು, ಗೂಂಡಾಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೋಲೀಸರು ಹಾಗೂ ವೈದ್ಯರು ಪ್ರಾಣಭಯದಿಂದ ಹಿಂದೆ ಸರಿದಿದ್ದರು. ಪೋಲೀಸರ ಸಮಯಪ್ರಜ್ಞೆ ಅವರನ್ನು ಕಾಪಾಡಿದೆ, ಇಲ್ಲವಾದಲ್ಲಿ ಘೋರ ಅನಾಹುತ ನಡೆದು ಹೋಗುತ್ತಿತ್ತೇನೋ. ವೀಡಿಯೋ ನೋಡಿ,

Watch Video

Previous Post Next Post