ನನ್ನ ಪರ್ಮೀಷನ್ ಇಲ್ಲದೆ ನನ್ ಏರಿಯಾಗೆ ಹೋಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ, ಮತ್ತೆ ಮತಾಂಧರ ಪರವಹಿಸಿದ ಜಮೀರ್ ಅಹ್ಮದ್. ವೀಡಿಯೋ ನೋಡಿ

ನನ್ನ ಪರ್ಮೀಷನ್ ಇಲ್ಲದೆ ರಾತ್ರಿ ವೇಳೆ ಬಿಬಿಎಂಪಿ ಅಧಿಕಾರಿಗಳು ಯಾಕೆ ಪಾದರಾಯನಪುರಕ್ಕೆ ಹೋಗಬೇಕು. ರಾತ್ರಿ ಹೋಗಿದ್ದು ನಿಮ್ಮ ತಪ್ಪು ಎಂದು ಬಿಬಿಎಂಪಿ ಮೇಲೆ ಶಾಸಕ ಜಮೀರ್ ಅಹಮದ್ ಗೂಬೆ ಕೂರಿಸಿದ್ದಾರೆ.

ನನ್ನ ಏರಿಯಾದಿಂದ ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗುವ ಮುನ್ನ ನನ್ನ ಪರ್ಮೀಷನ್ ಕೇಳಬೇಕಿತ್ತು. ಬೆಳಗ್ಗೆ ವೇಳೆಯಲ್ಲಿ ಕೊರೋನಾ ಶಂಕಿತರನ್ನು ಕರೆದುಕೊಂಡು ಹೋಗುವಂತೆ ಕಮಿಷನರ್ ಗೆ ಸಹ ಹೇಳಿದ್ದೆ. ರಾತ್ರಿ ಹೋಗುವ ಅಗತ್ಯವೇನಿತ್ತು?

ಭಾನುವಾರ ಬೆಳಗ್ಗೆಯಿಂದ ನನ್ನ ಪಿಎ ಕಾಯ್ತಾ ಕುಳಿತಿದ್ದರು. ಹೋಟೆಲ್ ಸಿಗದ ಹಿನ್ನೆಲೆಯಲ್ಲಿ ರಾತ್ರಿ ಹೋಗಿದ್ದರಿಂದ ಅಲ್ಲಿಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಮಗೆ ಇಲ್ಲಿಯೇ ಚಿಕಿತ್ಸೆ ನೀಡಿ ಎಂದು ಜನರು ಒತ್ತಾಯಿಸಿದ್ದಾರೆ. ಎಲ್ಲರಿಗೂ ತಿಳುವಳಿಕೆ ಹೇಳಿ ಸೋಂಕು ಶಂಕಿತರನ್ನು ಕರೆದುಕೊಂಡು ಹೋಗುವ ಬದಲು ಮನೆಯ ಮುಂದೆ ವಾಹನ ತೆಗೆದುಕೊಂಡು ನಿಂತಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಜಮೀರ್ ಅಹಮದ್ ಹೇಳಿದ್ದಾರೆ. ವೀಡಿಯೋ ನೋಡಿ,

Watch Video

Previous Post Next Post