ಮಹಿಳೆಯರ ಸೊಂಟದ ಮೇಲಿರುವ ಡಾಬಿಗೂ, ಪೋಲಿಸರ ಸೊಂಟದಲ್ಲಿರುವ ರಿವಾಲ್ವರ್ ಗೂ ಏನು ವ್ಯತ್ಯಾಸ? ಪಾದರಾಯನುರ ಘಟನೆ ಬಗ್ಗೆ ಅಜಿತ್ ಹನುಮಕ್ಕನವರ್ ಮಾತು.

ಆದಿತ್ಯವಾರ ರಾತ್ರಿ ಸೀಲ್ ಡೌನ್ ಆಗಿರುವ ಪಾದರಾಯನಪುರದ ಪೋಲೀಸ್ ಚೌಕಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರ ಮೇಲೆ ಪುಂಡರ ಗ್ಯಾಂಗ್ ದಾಳಿ ಮಾಡಿ ಪೋಲೀಸ್ ಚೌಕಿಯನ್ನು ಧ್ವಂಸ ಮಾಡಿ, ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೊಗೆದಿತ್ತು. ಗೂಂಡಾಗಳ ಗುಂಪು ಚೌಕಿಯತ್ತ ಬರುತ್ತಿದ್ದಂತೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸರು ಪ್ರಾಣರಕ್ಷಣೆಗಾಗಿ ಸ್ಥಳದಿಂದ ಹಿಂದೆಸರಿದಿದ್ದರು.

ಈ ಬಗ್ಗೆ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಹನುಮಕ್ಕನವರ್ ಪೋಲೀಸರ ಕೈಕಟ್ಟಿಹಾಕಿರುವ ಸರ್ಕಾರದ ವಿರುದ್ಧ ಹರಿಹಾಯ್ದರು. ಕೈಯಲ್ಲಿ ರಿವಾಲ್ವರ್ ಇದ್ದರೂ ತಮ್ಮ ಮೇಲೆ ದಾಳಿಯಾಗುತ್ತಿದ್ದಾಗ ಪೋಲೀಸರಿಗೆ ಬಳಸಲು ಅನುಮತಿಯಿಲ್ಲ. ಮಹಿಳೆಯರ ಸೊಂಟದ ಮೇಲಿರುವ ಡಾಬಿಗೂ, ಪೋಲಿಸರ ಸೊಂಟದ ಮೇಲಿರುವ ರಿವಾಲ್ವರ್ ಗೂ ಏನು ವ್ಯತ್ಯಾಸ? ಎಂದು ಹೇಳಿದ್ದಾರೆ. ಇನ್ನೇನು ಹೇಳಿದ್ದಾರೆ ವೀಡಿಯೋ ನೋಡಿ

Watch Video

Previous Post Next Post