ಏಯ್, ಮುಟ್ಟಿದ್ರೆ ಚಪ್ಪಲಿ ಕಿತ್ತೋಗೋಹಂಗೆ ಬಾರಿಸ್ತೇನೆ. ಲಾಕ್-ಡೌನ್ ಉಲ್ಲಂಘಿಸಿದ ಮಹಿಳೆಯಿಂದ ಪೋಲೀಸರಿಗೆ ಆವಾಜ್, ವೀಡಿಯೋ ನೋಡಿ

ಪಾಸ್ ಇಲ್ಲದಿದ್ದರೂ ಆಟೋದಲ್ಲಿ ಸಂಚರಿಸುತ್ತಿದ್ದ ಮಹಿಳೆಯನ್ನು ತಡೆದ ಪೋಲೀಸರಿಗೆ ಮಹಿಳೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನ ಕೆ.ಆರ್.ಸರ್ಕಲ್ ನಲ್ಲಿ ನಡೆದಿದೆ.

ಲಾಕ್ -ಡೌನ್ ಇದ್ದರೂ ಯಾವುದೇ ಪಾಸ್ ಇಲ್ಲದೆ ಮಹಿಳೆ ಸಂಚರಿಸುತ್ತಿದ್ದಳು. ಈ ಸಂದರ್ಭದಲ್ಲಿ ತಡೆದು ನಿಲ್ಲಿಸಿದ ಪೋಲೀಸರು ಮಹಿಳೆಯನ್ನು ವಿಚಾರಿಸಿದಾಗ ಆಕೆ ನಾನು ಮಿನಿಸ್ಟರ್ ಕಡೆಯವಳು, ನನ್ನ ಟಚ್ ಮಾಡಿದ್ರೆ ಚಪ್ಪಲಿಯಲ್ಲಿ ಬಾರಿಸ್ತೇನೆ ಎಂದು ಧಮ್ಕಿ ಹಾಕಿದ್ದಾಳೆ. 

ಘಟನೆಯ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದ ಪೋಲೀಸರಿಂದ ಮೊಬೈಕ್ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ, ಅಲ್ಲದೆ ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾಳೆ. ಇದೀಗ ಮಹಿಳೆಯ ವೀಡಿಯೋ ವೈರಲ್ ಆಗಿದೆ, ಇಲ್ಲಿದೆ ನೋಡಿ

Watch Video

Previous Post Next Post