ಈ ಕೋರೋನಾ ನಮಗೆ ಕಲಿಸಿದ ಪಾಠವಾದರೂ ಏನು ಗೊತ್ತೇ, ಸಹೋದರಿ ಅದ್ಬುತವಾಗಿ ವಿವರಿಸಿದ್ದಾರೆ ವೀಡಿಯೋ ನೋಡಿ

ಕೊರೋನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ತನ್ನನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ, ತಾನೇ ಬುದ್ಧಿವಂತ, ತಾನೇ ಶ್ರೇಷ್ಟ ಎನ್ನುತ್ತಿದ್ದ ಮನುಷ್ಯನನ್ನು ಮನೆಯಿಂದಲೂ ಹೊರ ಬರೋಕು ಹೆದರುವಂತೆ ಮಾಡಿದೆ ಈ ಕೊರೋನಾ ಸೋಂಕು.

ಆದರೂ ಈ ಕೊರೋನಾ ಸೋಂಕಿನಿಂದ ಜನರು ಕಲಿತಿದ್ದು, ಕಲಿಯಬೇಕಾಗಿರೋದು ಬಹಳಷ್ಟಿದೆ. ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಹೊಂದಿದ್ದವರೂ ಈಗ ಜೀವದ ಮುಂದೆ ಹಣದ ಮೌಲ್ಯ ಶೂನ್ಯ ಎಂಬುದನ್ನು ಅರಿತಿದ್ದಾರೆ. ಇಂತಹ ಕಾಯಿಲೆ ಬಂದರೆ ಶ್ರೀಮಂತ, ಬಡವ, ಜಾತಿ, ಧರ್ಮ ಎನ್ನದೆ ಎಲ್ಲರನ್ನೂ ಬಲಿತೆಗೆದುಕೊಳ್ಳುತ್ತೆ ಎಂಬುದನ್ನು ನಾವು ಕಾಣಬಹುದು.

ಈ ವೀಡಿಯೋದಲ್ಲಿ ಕಾಣುವ ಯುವತಿ ಈ ಬಗ್ಗೆಯೇ ಅದ್ಭುತವಾಗಿ ಮಾತನಾಡಿದ್ದಾರೆ. ಈ ಕೊರೋನಾ ಮನುಷ್ಯನಿಗೆ ಕಲಿಸಿದ ಪಾಠವಾದರೂ ಎಂತದ್ದು, ಯುವತಿಯ ಬಾಯಲ್ಲೇ ಕೇಳೋಣ ಬನ್ನಿ. ವೀಡಿಯೋ ನೋಡಿ,

Watch Video

Previous Post Next Post