ಕೊರೋನಾ ಆತಂಕದ ನಡುವೆ ಆಕಾಶದಲ್ಲಿ ಕಂಡುಬಂತು ಬೆಂಕಿಯ ಚೆಂಡು, ವೀಡಿಯೋ ನೋಡಿ

ಇಂಗ್ಲೆಂಡ್ ನ ಕೇಂಬ್ರಿಡ್ಜ್ ನ ಜನರು ರಾತ್ರಿ ಆಗಸದಲ್ಲಿ ವಿಚಿತ್ರವಾದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಆಕಾಶದಿಂದ ಬೆಂಕಿಯ ಚೆಂಡೊಂದು ರಬಸವಾಗಿ ಭೂಮಿಯ ಕಡೆ ಬರುತ್ತಿರೋದನ್ನು ಕಂಡು ದಿಗ್ಭ್ರಾಂತರಾದ ಜನ ಏನಾಗುತ್ತಿದೆ ಎಂದು ಊಹಿಸುವಷ್ಟರಲ್ಲಿ ಅದು ಮಾಯವಾಗಿ ಹೋಗಿದೆ.

ಸುಮಾರು 20ನಿಮಿಷಗಳ ಕಾಲ ಆಲಾಶದಲ್ಲಿ ಕಂಡು ಬಂದ ಬೆಂಕಿಚೆಂಡಿನಂತಹ ಆಕೃತಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೆಲವರು ಇದನ್ನು ಏಲಿಯನ್ ವಾಹನ ಎಂದು ಕರೆದರೆ ಇನ್ನು ಕೆಲವರು ಇದು ಧೂಮಕೇತು ಇರಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಧೂಮಕೇತುವಿನ ಬಗ್ಗೆ ತಿಳಿದಿರುವ ಗೆರಿ ಅಂಡರ್ವುಡ್ ಅವರು, ಇದು ಧೂಮಕೇತು ಆಗಿರಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಧೂಮಕೇತುವಾದರೆ 20ನಿಮಿಷಗಳ ಕಾಲ ಗೋಚರಿಸುವುದಿಲ್ಲ, ಅದು ಕೆಲವೇ ಕ್ಷಣಗಳಲ್ಲಿ ಗೋಚರಿಸಿ ಮಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಈ ಘಟನೆಯ ಬಗ್ಗೆ ಅಧ್ಯಯನ ನಡೆಸುತ್ತಿರುವ ನ್ಯಾಷನಲ್ ಸ್ಪೇಸ್ ಅಕಾಡೆಮಿ ಸಂಸ್ಥೆಗೂ ಈ ನಿಗೂಢ ವಸ್ತು ಏನೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗಿಲ್ಲ. ಅವರ ಅಂದಾಜಿನ ಪ್ರಕಾರ ಇದು ಎತ್ತರದಲ್ಲಿ ಹೋಗುತ್ತಿದ್ದ ಜೆಟ್ನಿಂದ ನಿರ್ಮಾಣವಾದ ಹೊಗೆ ಆಗಿರಬಹುದು, ಅದು ಅಸ್ತಂಗತಗೊಳ್ಳುತ್ತಿರುವ ಸೂರ್ಯನ ಕಿರಣಗಳು ಪ್ರತಿಫಲಿಸಿ ಈ ರೀತಿ ಕೆಂಪಗೆ ಬೆಂಕಿಯ ಚೆಂಡಿನಂತೆ ಕಂಡಿರಬಹುದು ಎಂದು ಹೇಳಿದೆ. ಈ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post