'ತಾಕತ್ತಿದ್ರೆ ಹಿಡಿಯಿರಿ', ಕುಡಿದ ನಶೆಯಲ್ಲಿ ಪೋಲೀಸರಿಗೆ ಸವಾಲು ಹಾಕಿ ಕಾರಿನಲ್ಲಿ ಪರಾರಿಯಾದ ಯುವತಿಯರು

ಇಡೀ ದೇಶವೇ ಕೊರೊನಾ ಕಾರಣ ಲಾಕ್‍ಡೌನ್ ಆಗಿದೆ. ಕೊರೋನಾ ಸೋಂಕಿತರು ಹೆಚ್ಚಿರುವ ಬೆಂಗಳೂರಿನ ಹಲವು ಭಾಗಗಳನ್ನು ಸೀಲ್‍ಡೌನ್ ಕೂಡ ಮಾಡಲಾಗಿದೆ. ಪೋಲೀಸರು ಹಗಲು ರಾತ್ರಿಯೆನ್ನದೆ ಲಾಕ್-ಡೌನ್ ನಿಮಿತ್ತ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಮಧ್ಯೆ ಯುವತಿಯರಿಬ್ಬರು ಮದ್ಯದ ನಶೆಯಲ್ಲಿ ಕಾರನ್ನು ರ‍್ಯಾಶ್ ಆಗಿ ಚಾಲನೆ ಮಾಡಿಕೊಂಡು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೊರೋನಾ ಹಿನ್ನೆಲೆಯಲ್ಲಿ ಎಲ್ಲಾ ಮದ್ಯದಂಗಡಿಗಳು ಬಂದ್ ಆಗಿದ್ದರೂ ಕಂಠಪೂರ್ತಿ ಕುಡಿದಿದ್ದ ಯುವತಿಯರು ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ ಬಳಿ ಪೋಲೀಸರು ಗಾಡಿ ತಡೆದರೂ ನಿಲ್ಲಿಸದೆ ಇನ್ಸ್‌ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದು, ಅಲ್ಲಿಂದ ರ‍್ಯಾಶ್ ಡ್ರೈವಿಂಗ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಕುಡಿದ ನಶೆಯಲ್ಲಿದ್ದ ಯುವತಿಯರ ಪುಂಡಾಟ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಅಲ್ಲಿಂದ ನಂತರ ಜೆ.ಬಿ ನಗರ ಪೊಲೀಸರು ಯುವತಿಯರಿದ್ದ ಕಾರನ್ನು ಬೆನ್ನತ್ತಿ ಸುಮಾರು 1 ಕಿ.ಮೀ ದೂರದಲ್ಲಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಯುವತಿಯರು ನಮ್ಮ ಹತ್ತಿರ ಪಾಸ್ ಇದೆ, ನಮಗೆ ಮೇಲಾಧಿಕಾರಿಗಳು ಗೊತ್ತು ಎಂದು ಪೋಲೀಸರ ಮೇಲೆಯೇ ಆವಾಜ್ ಹಾಕಿದ್ದಾರೆ.

ನಮ್ಮನ್ನು ಸಾಧ್ಯವಾದರೆ ಹಿಡಿಯಿರಿ ಎಂದು ಅಲ್ಲಿಂದಲೂ ಯುವತಿಯರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಯುವತಿಯರು ಚಾಲಾಯಿಸುತ್ತಿದ್ದ ಕಾರಿನ ನಂಬರ್ ಮೂಲಕ ಅವರನ್ನು ಪತ್ತೆ ಮಾಡಲು ಶೋಧಕಾರ್ಯ ನಡೆಸುತ್ತಿದ್ದಾರೆ. ಯುವತಿಯರ ರಂಪಾಟದ ವೀಡಿಯೋ ನೋಡಿ,

Watch Video

Previous Post Next Post