ಇದು ನಮ್ ಏರಿಯಾ, ಇಲ್ಲಿ ಪೋಲೀಸರದ್ದೇನು ನಡಿಯಲ್ಲ ಎಂದ ಯುವಕರಿಗೆ ಪೋಲೀಸರು ಮಾಡಿದ್ದೇನು ನೋಡಿ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್-ಡೌನ್ ಜಾರಿಯಾಗಿದ್ದರೆ ಕೆಲ ಪುಂಡರು ಇದನ್ನೇ ಬಳಸಿಕೊಂಡು ಟಿಕ್-ಟಾಕ್ ವೀಡಿಯೋ ಮಾಡಿ ಫೇಮಸ್ ಆಗಲು ಹೊರಟಿದ್ದಾರೆ. ಆದರೆ ಅವರು ಫೇಮಸ್ ಆಗಲು ಬಳಸಿಕೊಂಡ ಮಾರ್ಗ ಮಾತ್ರ ಅವರಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಕಳೆದ ಕೆಲ ವಾರದಲ್ಲಿ ತಾವು ಮಾಡಿದ ಟಿಕ್-ಟಾಕ್ ವೀಡಿಯೋ ಕಾರಣಕ್ಕಾಗಿ ಅನೇಕರು ಜೈಲುಪಾಲಾಗಿದ್ದಾರೆ. ಇದೀಗ ಯುವಕರ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಯುವಕರು ಪೋಲೀಸರನ್ನು ಟ್ರೋಲ್ ಮಾಡಿದ್ದಾರೆ.

ಇದು ನಮ್ ಏರಿಯಾ, ಇಲ್ಲಿ ಪೋಲೀಸರದ್ದೇನು ನಡಿಯಲ್ಲ ಎಂದು ವೀಡಿಯೋ ಮಾಡಿ ಹಂಚಿಕೊಂಡಿದ್ದರು. ಇದನ್ನು ಕೆಲವರು ಪೋಲೀಸರಿಗೆ ಟಾಗ್ ಮಾಡಿದ್ದು ವೀಡಿಯೋ ಮಾಡಿದ ಪುಂಡರನ್ನು ಉಟ್ಟಬಟ್ಟೆಯಲ್ಲೇ ಪೋಲೀಸರು ಠಾಣೆಗೆ ಎಳೆದು ತಂದಿದ್ದಾರೆ.

ನಾಲ್ಕು ಲಾಠಿ ಏಟು ಕೊಟ್ಟು ಯುವಕರಲ್ಲಿ ಕ್ಷಮೆ ಕೇಳಿಸಿದ್ದಾರೆ. ಇದೀಗ ಎರಡೂ ವೀಡಿಯೋಗಳನ್ನು ಸೇರಿಸಿ ಯುವಕರನ್ನು ಟ್ರೋಲ್ ಮಾಡಲಾಗುತ್ತಿದೆ. ಪೋಲೀಸರನ್ನು ಟ್ರೋಲ್ ಮಾಡಲು ಹೋಗಿ ಇದೀಗ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಷ್ಟೇ ಅಲ್ಲದೆ, ತಾವೇ ಟ್ರೋಲ್ ಗೆ ಒಳಗಾಗಿದ್ದಾರೆ. ವೀಡಿಯೋ ನೋಡಿ,

Watch Video

Previous Post Next Post