ಇಬ್ಬರು ಸಾಧುಗಳ ಮೇಲೆ ಮುಗಿಬಿದ್ದಿದ್ದು ಇನ್ನೂರು ರಾಕ್ಷಸರು, ಪೋಲೀಸರ ಕಣ್ಣ ಮುಂದೆಯೆ ಸಾಧುಗಳ ಮಾರಣ ಹೋಮ(ವೀಡಿಯೋ)

ದೇಶವೇ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ನಡುವಲ್ಲೇ ಮಹಾರಾಷ್ಟ್ರದಲ್ಲಿ ಮನುಕುಲ ತಲೆತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಹಿಂದೂ ಸಾಧುಗಳು ಸೇರಿ ಮೂವರನ್ನು ಇನ್ನೂರಕ್ಕು ಹೆಚ್ಚು ಜನರಿದ್ದ ಗುಂಪು ದೊಣ್ಣೆ ಬಡಿಗೆಗಳಿಂದ ಥಳಿಸಿ ಹತ್ಯೆ ಮಾಡಿದೆ.

ಘಟನೆ ನಡೆದಿರೋದು ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ. ನಾಸಿಕ್ ನಿಂದ ಮುಂಬೈಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಇಬ್ಬರು ಸಾಧುಗಳು ಮತ್ತು ಡ್ರೈವರ್ ಸೇರಿ ಮೂವರನ್ನು ಗುಂಪು ಹತ್ಯೆಗೈದಿದೆ. ಮೃತರಲ್ಲಿ 70ವರ್ಷದ ವೃದ್ದ ಸಾಧುವೂ ಸೇರಿದ್ದಾರೆ.
ಮುಂಬೈ ಗೆ ತೆರಳಲು ಪಾಲ್ಗರ್ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಇನ್ನೂರಕ್ಕೂ ಹೆಚ್ಚು ಜನರಿದ್ದ ಗುಂಪು ಇವರ ಕಾರನ್ನು ತಡೆದು ಸಾಧುಗಳು ಮತ್ತು ಕಾರಿನ ಚಾಲಕನನ್ನು ಹೊರಗೆಳೆದು ಥಳಿಸಲು ಶುರು ಮಾಡಿದ್ದಾರೆ. ಗ್ರಾಮಸ್ಥರು ಇವರನ್ನು ಮಕ್ಕಳ ಕಳ್ಳರು ಎಂದು ತಿಳಿದುಕೊಂಡು ಥಳಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಘಟನೆ ಮಾಹಿತಿ ಪಡೆದ ಸ್ಥಳೀಯ ಪೋಲೀಸರು ಸ್ಥಳಕ್ಕೆ ಧಾವಿಸಿದಾಗ ಮೂವರು ಜೀವಂತವಾಗೆ ಇದ್ದರು. ಆದರೆ ನಂತರ ಗುಂಪು ಪೋಲೀಸರ ಸಮ್ಮುಖದಲ್ಲೇ ಮೂವರನ್ನು ದೊಣ್ಣೆ, ಕುಡುಗೋಲುಗಳಿಂದ ಥಳಿಸಿ ಹತ್ಯೆಗೈದಿದೆ. ಗುಂಪುನಲ್ಲಿದ್ದವರು ಸಾಧುಗಳನ್ನು ಹತ್ಯೆ ಮಾಡಬೇಕೆಂದೆ ಥಳಿಸಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದ್ದು, ಇದರ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಘಟನೆ ಸಂಬಂಧ ಪೋಲೀಸರು 110ಜನರನ್ನು ಬಂಧಿಸಿದ್ದಾರೆ. ಯಾವುದಾದರೂ ದುರುದ್ದೇಶದಿಂದ ಹತ್ಯೆ ನಡೆಸಲಾಗಿದೆಯೇ ಅಥವಾ ಮಕ್ಕಳ ಕಳ್ಳರು ಎಂಬ ತಪ್ಪು ಕಲ್ಪನೆಯಿಂದ ಹತ್ಯೆ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Watch Video

Previous Post Next Post