ರಕ್ಷಣಾ ಕಾರ್ಯಾಚರಣೆಗೆ ಬಂದ ಸೇನಾ ಜವಾನರಿಗೆ ಸೆಲ್ಯೂಟ್ ಹೊಡೆದ ಬಾಲಕಿ ವಿಡಿಯೋ ವೈರಲ್

ಕರ್ನಾಟಕ ಸೇರಿ ಮಹಾರಾಷ್ಟ್ರದಲ್ಲಿ ಭಾರಿ ಮಳೆಗೆ ಉಂಟಾದ ಪ್ರವಾಹದಲ್ಲಿ ಸಾವಿರಾರು ಮಂದಿ ಸಿಲುಕಿಕೊಂಡಿದ್ದಾರೆ. ಎನ್ಡಿಆರ್ಎಫ್ ,ಎಸ್ಡಿಆರ್ಎಫ್, ಭಾರತೀಯ ಸೇನಾ ಪಡೆಗಳು ಹಗಲು ರಾತ್ರಿಯೆನ್ನದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ .ಇನ್ನು ಮಹಾರಾಷ್ಟ್ರದ ಗೋವನ್ ಬಾಗ್ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದ್ದ ಭಾರತೀಯ ಸೇನಾ ಜವಾನರಿಗೆ ಬಾಲಕಿಯೊಬ್ಬಳು ಸೆಲ್ಯೂಟ್ ಹೊಡೆದು ನೀವು ಉತ್ತಮವಾದ ಕೆಲಸ ಮಾಡುತ್ತಿದ್ದೀರಾ ಎಂದಿದ್ದಾಳೆ .ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಾಲಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
Previous Post Next Post