"ನಮ್ ತಂಟೆಗೆ ಬಂದ್ರೆ ಕೊಂದಾಕ್ಬಿಡ್ತೀವಿ", ಮೈಸೂರಿನಲ್ಲಿ ದಾಳಿಗೊಳಗಾದ ಆಶಾಕಾರ್ಯಕರ್ತೆ ಬಿಚ್ಚಿಟ್ಟ ಬೆಚ್ಚಿಬೀಳಿಸೋ ಮಾಹಿತಿ. ವೀಡಿಯೋ ನೋಡಿ

ಪಾದರಾಯನಪುರ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಇಂದು ಮತ್ತೆ ಆಶಾಕಾರ್ಯಕರ್ತೆಯರ ಮೇಲೆ ದಾಳಿಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಕಟ್ಟಿಕೊಂಡು ನಿಂತಿದ್ದವರಿಗೆ ಬುದ್ದಿವಾದ ಹೇಳಿದ ಆಶಾಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಮೈಸೂರಿನ ಬನ್ನಿಮಂಟಪದ ಆಲೀಂ ನಗರದಲ್ಲಿ ಈ ಘಟನೆ ನಡೆದಿದೆ.

ಕೊರೋನಾ ಇಷ್ಟೊಂದು ಪ್ರಾಣಹಾನಿ ಮಾಡುತ್ತಿದೆ. ಹೀಗೆ ಗುಂಪುಕಟ್ಟಿಕೊಂಡು ಕೂತಿದ್ದೀರಲ್ಲ, ಮನೆಗೆ ಹೋಗಿ ಎಂದು ಆಶಾಕಾರ್ಯಕರ್ತೆ ಸುಮಯಾ ಫಿರ್ದೋಸ್ ಅಲ್ಲಿದ್ದ ಜನರಿಗೆ ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಯುವಕರು, ನಮ್ಮ ಮನೆಯಲ್ಲಿ ಜಾಗ ಇಲ್ಲ ಕೂರೋಕೆ ನಿಮ್ಮ ಮನೆಗೆ ಬರ್ಲ ಎಂದು ಅಸಭ್ಯವಾಗಿ ವರ್ತಿಸಿದ್ದಾರೆ. ಆದರೂ ಆಶಾಕಾರ್ಯಕರ್ತೆ, ಆಯ್ತು ಅಣ್ಣ ನಮ್ಮ ಮನೆಗೆ ಬನ್ನಿ ಆದ್ರೆ ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಮುಂದೆ ತೆರಳಿದ್ದಾರೆ.
ಮತ್ತೆ ಅದೇ ಗಲ್ಲಿಯಲ್ಲಿ ಹಿಂದೆ ಬರುವಾಗ ಗುಂಪು ಅಲ್ಲೇ ಇತ್ತು. ಇದರಿಂದ ಕೋಪಗೊಂಡ ಆಶಾಕಾರ್ಯಕರ್ತೆ, ಗುಂಪು ಕಟ್ಟಿಕೋಬೇಡಿ ಸಾಮಾಜಿಕ ಅಂತರ ಕಾಪಾಡಿ ಅಂದ್ರು ಕೇಳಲ್ವಲ್ಲ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಗುಂಪು, ಆಶಾಕಾರ್ಯಕರ್ತೆಯ ಮೇಲೆ ಮುಗಿಬಿದ್ದಿದ್ದು ನಮ್ ತಂಟೆಗೆ ಬಂದ್ರೆ ಚಾಕು ಚುಚ್ಚಿ ಕೊಂದಾಕ್ಬಿಡ್ತೀವಿ ನಿಮ್ದೆ ಹಾವಳಿ ಆಗಿದೆ ಎಲ್ಲಾ ಕಡೆ ಎನ್ನುತ್ತಾ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೋಲೀಸರು ಆಶಾಕಾರ್ಯಕರ್ತೆಗೆ ಬೆದರಿಕೆ ಹಾಕಿದ ಮೂವರು ಆರೋಪಿಗಳನ್ನು ಬಂದಿಸಿದ್ದಾರೆ. ಬಂದಿತರನ್ನು ಮೆಹಬೂಬ್, ಖಲೀಲ್, ಜಿಶಾನ್ ಎಂದು ಗುರುತಿಸಲಾಗಿದೆ. ಇವರ ಮೇಲೆ ಉತ್ತರಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯಸರ್ಕಾರ ಹೇಳಿದೆ. ದಾಳಿಗೊಳಗಾದ ಆಶಾಕಾರ್ಯಕರ್ತೆಯ ಮಾತುಗಳನ್ನು ಕೇಳಿ,

Watch Video

Previous Post Next Post