ಪಾದರಾಯನಪುರದ ಘಟನೆಗೆ ಮುಸ್ಲಿಂ ಯುವಕನ ಆಕ್ರೋಶ ಹೇಗಿದೆ ನೋಡಿ, ವೈರಲ್ ವೀಡಿಯೋ

ಪಾದರಾಯನಪುರದಲ್ಲಿ ಪೋಲೀಸರು ಹಾಗೂ ವೈದ್ಯರ ಮೇಲೆ ಗೂಂಡಾಗಳ ಗುಂಪು ನಡೆಸಿದ ದಾಳಿಯ ಬಗ್ಗೆ ಯುವಕನೋರ್ವ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಸಿದ್ಧಾಪುರ ಮೂಲದ ಶಾಕಿಬ್ ಎಂಬ ಮುಸ್ಲಿಂ ಯುವಕ ಪಾದರಾಯನಪುರದಲ್ಲಿ ನಡೆದ ಗಲಭೆಯನ್ನು ಖಂಡಿಸಿ ವೀಡಿಯೋ ಮಾಡಿದ್ದಾನೆ.

ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಪೋಲೀಸರ ಮೇಲೆ ದಾಳಿ ಮಾಡಿರೋದು ತಪ್ಪು. ದಾಳಿ ನಡೆಸಿದ ಎಲ್ಲಾ ಆರೋಪಿಗಳ ಬಂಧನವಾಗಿರೋದು ಖುಷಿಯ ವಿಚಾರ, ಆದರೆ ಇದರ ಹಿಂದಿರುವ ಕಾಣದ ಕೈಗಳನ್ನೂ ಬಂಧಿಸಿ ಎಂದು ಯುವಕ ಆಗ್ರಹಿಸಿದ್ದಾನೆ.

ದಾಳಿಕೋರರು ಅಮಾಯಕರು, ಅನಕ್ಷರಸ್ಥರು ಎಂದು ಮಾತನಾಡಿದ ಕೆಲ ರಾಜಕೀಯ ನಾಯಕರುಗಳು ಇಂತಹ ಯುವಕರನ್ನಾದರೂ ನೋಡಿ ನೀವು ಬುದ್ಧಿ ಕಲಿಯಬೇಕು. ಯುವಕನ ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post