ಟಿಕ್-ಟಾಕ್ ಫ್ಯಾನ್ಸ್ ಗಾಗಿ ನೇಣು ಹಾಕುವ ವೀಡಿಯೋ ಮಾಡಲು ಹೋಗಿ ನೇಣಿನ ಕುಣಿಕೆಗೆ ಬಲಿಯಾದ ಯುವಕ

ಲಾಕ್-ಡೌನ್ ಸಂದರ್ಭದಲ್ಲಿ ಯುವಜನಾಂಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಇದರಲ್ಲಿ ಟಿಕ್-ಟಾಕ್ ಅತೀಹೆಚ್ಚು ಜನಪ್ರಿಯತೆ ಪಡೆದಿದ್ದು, ಇದೀಗ ಟಿಕ್-ಟಾಕ್ ವೀಡಿಯೋ ಮಾಡುವ ಹುಚ್ಚು ಯುವಕನೋರ್ವನನ್ನು ಬಲಿತೆಗೆದುಕೊಂಡಿದೆ.

ಗದಗ ತಾಲೂಕಿನ ನರಸಾಪುರ ಗ್ರಾಮದ ಯುವಕ ಪ್ರಕಾಶ್ ಎಂಬಾತನೆ ಟಿಕ್-ಟಾಕ್ ಹುಚ್ವಿಗೆ ಬಲಿಯಾದಾತ. ನೇಣು ಹಾಕಿದ ಹಾಗೆ ನಟಿಸುವ ವೀಡಿಯೋ ಮಾಡಲು ನೇಣಿನ ಕುಣಿಕೆ ತಯಾರಿಸಿದ್ದಾನೆ, ವೀಡಿಯೋ ರೆಕಾರ್ಡಿಂಗ್ ಆನ್ ಮಾಡಿ ತನ್ನ ಮೊಬೈಲ್ ಮನೆಯ ಕಿಟಕಿಯ ಮೇಲೆ ಇಟ್ಟಿದ್ದಾನೆ.

ಆದರೆ ಅದೇ ನೇಣಿನ ಕುಣಿಕೆ ಆತನ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Previous Post Next Post