ಕರೋನಾ ವೈರಸ್ ಗಿಂತ ಮೊದಲು ಈ ಸಮಾಜಘಾತುಕ ವೈರಸ್ ಗಳನ್ನು ಹೊಡೆದು ಹಾಕಿ, ಮಹಿಳೆಯ ವೀಡಿಯೋ ಸಖತ್ ವೈರಲ್

ದೇಶದಾದ್ಯಂತ ಕರೋನಾ ಲಾಕ್-ಡೌನ್ ನಡುವೆಯೇ ಕರೋನಾ ವಾರಿಯರ್ಸ್ ಗಳ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ದೇವತೆಗಳ ರೀತಿ ತಮ್ಮ ಜೀವ ಕಾಪಾಡಲು ಬಂದ ವೈದ್ಯರು, ಪೋಲೀಸರ ಮೇಲೆಯೇ ಉಗುಳುವುದು, ಹಲ್ಲೆನಡೆಸುವುದು ಮಾಡಲಾಗುತ್ತಿದೆ.
ರಾಜ್ಯದಲ್ಲಿಯೂ ಹಲವೆಡೆ ಕೊರೋನಾ ವಾರಿಯರ್ಸ್ ಮೇಲೆ ಧಾಳಿಗಳಾಗಿದೆ. ಆದಿತ್ಯವಾರ ಪಾದರಾಯನಪುರದಲ್ಲಿ ಧಾಳಿಯಾಗಿದ್ದರೆ ಇಂದು ಮೈಸೂರಿನಲ್ಲಿ ಮತ್ತೆ ಆಶಾ ಕಾರ್ಯಕರ್ತೆಯ ಮೇಲೆ ಅಂತಹದ್ದೇ ಧಾಳಿ ನಡೆಸಿ ಕೊಲೆ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ.

ಇದೆಲ್ಲ ಕಾರಣಗಳಿಂದ ಜನರು ರಾಜ್ಯ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪೋಲೀಸರ ಕೈ ಕಟ್ಟಿಹಾಕಿದೆ, ಪೋಲೀಸರ ಮೇಲೆ ಧಾಳಿಯಾದರೂ ಅವರಲ್ಲಿರುವ ಆಯುಧಗಳನ್ನು ಬಳಸುವುದಕ್ಕೆ ಆಗುತ್ತಿಲ್ಲ. ಪೋಲೀಸರ ಬಳಿ ಇರೋದು ನೈಜ ಪಿಸ್ತೂಲ್ ಅಥವಾ ಮಕ್ಕಳ ಆಟದ ಸಾಮಾಗ್ರಿಯೋ ಎಂದು ಅನೇಕರು ಆಕ್ರೊಶದಿಂದ ಕೇಳಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಗಿಂತ ಹೆಚ್ಚು ತೊಂದರೆ ಈ ಸಮಾಜಘಾತುಕ ವೈರಸ್ ಗಳದ್ದೇ ಆಗಿದೆ. ಮೊದಲು ಅವರನ್ನು ಹೊಡೆದು ಹಾಕಿ, ನಿಮ್ಮ ಮೇಲೆ ದಾಳಿ ಮಾಡಲು ಬಂದಾಗ ಒಂದಿಬ್ಬರ ಕಾಲಿಗೆ ಗುಂಡಿಕ್ಕಿ ಆವಾಗ ಯಾರೂ ಪೋಲೀಸರು, ವೈದ್ಯರ ಮೇಲೆ ಹಲ್ಲೆಮಾಡುವ ಧೈರ್ಯ ಮಾಡಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ವೈರಲ್ ವೀಡಿಯೋ ನೋಡಿ,

Watch Video

Previous Post Next Post