ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ರೆ ಬೀದಿಗೆ ಬೀಳ್ತೀರ ಹುಷಾರ್, ಕಠಿಣ ಕಾನೂನು ಜಾರಿ ಮಾಡಿದ ಯೋಗಿ


ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟುಮಾಡಿದರೆ ಗಲಭೆಕೋರರಿಂದ ಅದರ ನಷ್ಟ ವಸೂಲಿ ಮಾಡಲಾಗುವುದು, ಯಾಕೆಂದರೆ ಉತ್ತರ ಪ್ರದೇಶ ಸರ್ಕಾರ ಯಾವುದೇ ಕಾರಣಕ್ಕೂ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಹೇಳಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿಯ ನಷ್ಟ ಮರಳಿ ಪಡೆಯುವಿಕೆ ನಿಯಮ 2020ರಂತೆ ಸಾರ್ವಜನಿಕರ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟುಮಾಡಿದ ದುಷ್ಕರ್ಮಿಗಳಿಂದಲೇ ನಷ್ಟ ಪರಿಹಾರ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Sponsored Ads


Continue Reading

ಜಾನ್ಸಿ, ಕಾನ್ಪುರ್, ಚಿತ್ರಕೂತ್ ಧಾಮ್, ಲಕ್ನೋ , ಅಯೋಧ್ಯೆ, ದೇವಿ ಪತನ್ ಪ್ರಯಾಗ್ ರಾಜ್ , ಅಜಮ್‌ಗರ್, ವಾರಣಾಸಿ, ಗೋರಖ್‌ಪುರ, ಬಸ್ತಿ ಮತ್ತು ವಿಂಧ್ಯಾಚಲ್ ಧಾಮ್ ವಿಭಾಗಗಳನ್ನು ಲಕ್ನೋಗಳಲ್ಲಿ ನ್ಯಾಯಮಂಡಳಿಯಲ್ಲಿ ಅಂಗೀಕರಿಸಲಾಗುವುದು. ಇದಲ್ಲದೆ, ಮೀರತ್ ನ್ಯಾಯಮಂಡಳಿಯು ಸಹರಾನ್‌ಪುರ, ಮೀರತ್ , ಮೊರಾದಾಬಾದ್, ಬರೇಲಿ ಮತ್ತು ಆಗ್ರಾ ವಿಭಾಗಗಳ ವ್ಯಾಪ್ತಿಯನ್ನು ಕೂಡ ಹೊಂದಿರುತ್ತದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಗಳು ಭುಗಿಲೆದ್ದ ನಂತರ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗುವ ವೆಚ್ಚವನ್ನು ಪ್ರತಿಭಟನಾಕಾರರಿಂದ ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಎಚ್ಚರಿಸಿದ್ದರು.

ಇದಕ್ಕಾಗಿ ಹಾನಿಯಿಂದಾದ ನಷ್ಟ ಮರುಪಡೆಯಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು. ಅಲ್ಲದೆ ಇಂತಹ ಪ್ರಕರಣ ಇತ್ಯರ್ಥಗೊಳಿಸಲು ನ್ಯಾಯಮಂಡಳಿಗಳನ್ನು ಸ್ಥಾಪಿಸಿತ್ತು.
Previous Post Next Post