ರಸ್ತೆಯಲ್ಲಿ ಸಾವಿರಾರು ಮುಖಬೆಲೆಯ ನೋಟುಗಳು ಬಿದ್ದಿದ್ರು ಮುಟ್ಟದೆ ದೂರ ಓಡಿದ ಜನ, ವೀಡಿಯೋ ನೋಡಿ

ಹಿಂದೆ ರಸ್ತೆ ಮೇಲೆ ಒಂದು ರೂಪಾಯಿ ನಾಣ್ಯ ಬಿದ್ದಿದ್ರೂ ಹೆಕ್ಕಿ ಕಿಸೆಗೆ ಹಾಕಿಕೊಳ್ಳುತ್ತಿದ್ದ ಜನರು ಈಗ ರಸ್ತೆ ಮೇಲೆ ನೋಟುಗಳು ಬಿದ್ದಿದ್ರು ಮುಟ್ಟದೆ ದೂರ ಓಡಿಹೋಗುತ್ತಿದ್ದಾರೆ. ಇದಕ್ಕೆಲ್ಲ  ಕಾರಣವಾಗಿದ್ದು ಕೊರೊನಾ ವೈರಸ್.

ಮಧ್ಯಪ್ರದೇಶದ ಇಂದೋರ್ ನ ಖಾತಿಪುರ ಪ್ರದೇಶದ ಲಾಡ್ಜ್ ಒಂದರ ಎದುರು ಅಪರಿಚಿತ ವ್ಯಕ್ತಿಯೊಬ್ಬ 100, 200 ಮತ್ತು 500 ರೂಪಾಯಿ ಮುಖಬೆಲೆಯ 25 ಕರೆನ್ಸಿ ನೋಟುಗಳನ್ನು ಎಸೆದು ಹೋಗಿದ್ದ. ಇದನ್ನು ಗಮನಿಸಿದ ಸ್ಥಳೀಯರು ಅದನ್ನು ಹೆಕ್ಕೋದು ಬಿಡಿ ಆ ನೋಟಿನ ಹತ್ತಿರ ಹೋಗುವ ಧೈರ್ಯವೂ ಮಾಡಲಿಲ್ಲ.

ಕೊನೆಗೆ ಮುನ್ಸಿಪಾಲಿಟಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ನೋಟುಗಳ ಮೇಲೆ ಸೋಂಕು ನಿವಾರಕಗಳನ್ನು ಸಿಂಪಡಿಸಿದ್ರು. ಬಳಿಕ ಪೊಲೀಸ್ ಪೇದೆಯೊಬ್ಬರು ಆ ನೋಟುಗಳನ್ನು ಕೋಲುಗಳ ಸಹಾಯದಿಂದ ಮೇಲೆತ್ತಿ ಪ್ಲಾಸ್ಟಿಕ್ ಬ್ಯಾಗ್ ಒಳಗೆ ತುಂಬಿದ್ರು.


ಇದೀಗ ಪೋಲೀಸರು ನೋಟು ಎಸೆದು ಹೋದ ಅಪರಿಚಿತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪವಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
Previous Post Next Post