ಕರೋನಾ ಯುದ್ಧ ಗೆಲ್ಲಲು ಸಿದ್ಧವಾಗುತ್ತಿರುವ ಕರೋನಾ ವಾರಿಯರ್, ಒಂದು ಕೋಟಿಗೂ ಅಧಿಕ ಜನರಿಂದ ವೀಕ್ಷಣೆ ಪಡೆದ ವೀಡಿಯೋ ನೀವೂ ನೋಡಿ

ಕರೋನಾ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಮರಣಮೃದಂಗವನ್ನೇ ಮುಂದುವರೆಸಿದೆ. ಈಗಾಗಲೆ ಲಕ್ಷಕ್ಕೂ ಹೆಚ್ಚು ಜನರನ್ನು ಆಹುತಿಪಡೆದುಕೊಳ್ಳುವ ಮೂಲಕ ಜನರನ್ನ ಭಯಬೀತಗೊಳಿಸಿದೆ.

ಪ್ರಪಂಚದ ಬಹುತೇಕ ರಾಷ್ಟ್ರಗಳು ಕರೋನಾ ಸೋಂಕು ಹರಡುವುದನ್ನು ತಡೆಯಲು ಲಾಕ್-ಡೌನ್ ಮೊರೆ ಹೋಗಿದೆ. ಕರೋನಾ ಭಯದಿಂದ ಜನರು ತಮ್ಮತಮ್ಮ ಮನೆಗಳಲ್ಲಿ ಬಂಧಿಯಾಗಿದ್ದರೆ ವೈದ್ಯರು, ಪೋಲೀಸರು ಕರೋನಾ ನಿಯಂತ್ರಣಕ್ಕೆ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.

ಅದರಲ್ಲೂ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ತಮಗೆ ಕರೋನಾ ತಗಲಬಹುದು ಎಂದು ಗೊತ್ತಿದ್ದೂ ಕರೋನಾ ಸೋಂಕಿತರ ಜೀವ ರಕ್ಷಣೆಗೆ ತನ್ನ ಜೀವ ಪಣಕ್ಕಿಟ್ಟು ಕೆಲಸಮಾಡುತ್ತಿದ್ದಾರೆ. ಇದೀಗ ಕರೋನಾ ವಾರಿಯರ್ ಒಬ್ಬಳ ವೀಡಿಯೋ ವೈರಲ್ ಆಗಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಪಿಪಿಇ ಗಳನ್ನು ಧರಿಸುತ್ತಾ ಸಿದ್ಧವಾಗುತ್ತಿರುವ ವೀಡಿಯೋ ಇದಾಗಿದೆ. ಈಗಾಗಲೇ ಈ ವೀಡಿಯೋವನ್ನು ಒಂದು ಕೋಟಿಗೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಇಲ್ಲಿದೆ ನೋಡಿ ವೀಡಿಯೋ,

Watch Video

Previous Post Next Post