ಪೌರಕಾರ್ಮಿಕರಲ್ಲಿ ಕರೋನಾ ಭೀತಿ ಹುಟ್ಟಿಸಿದ ಅಧಿಕಾರಿಯ ಯಡವಟ್ಟು, ಆಕೆ ಮಾಡಿದ ಘನಂದಾರಿ ಕೆಲಸವೇನು ನೋಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಅದಾಗಲೇ ಎರಡು ಜೀವಗಳು ಬಲಿಯಾಗಿದೆ. ಕರೋನಾ ಹಾಟ್-ಸ್ಪಾಟ್ ಎಂದೇ ಗುರುತಿಸಲಾಗಿರುವ ಬಂಟ್ವಾಳ ತಾಲೂಕಿನಲ್ಲಿ ಅಧಿಕಾರಿಯೊಬ್ಬರು ಮಾಡಿದ ಎಡವಟ್ಟು ಇದೀಗ ಕರೋನಾ ಭೀತಿಯನ್ನು ಹೆಚ್ಚಿಸಿದೆ.
ಹೌದು, ಬಂಟ್ವಾಳ ಪುರಸಭೆಯ ಪರಿಸರ ಅಭಿಯಂತರೆ ಯಾಸ್ಮಿನ್ ಸುಲ್ತಾನ್ ಎಂಬಾಕೆ ಮಾಡಿರೋ ಘನಂದಾರಿ ಕೆಲಸಕ್ಕೆ ಇದೀಗ ಬಡ ಪೌರಕಾರ್ಮಿಕರಲ್ಲಿ ಕರೋನಾ ಭೀತಿ ಎದುರಾಗಿದೆ. ಈಕೆ ಮೇಲಾಧಿಕಾರಿಯ ಗಮನಕ್ಕೆ ತಾರದೆ ಒಂದೇ ಥರ್ಮೋಮೀಟರ್ ನಿಂದ ಅನೇಕ ಪೌರಕಾರ್ಮಿಕರ ಜ್ವರದ ತಪಾಸಣೆ ಮಾಡಿದ್ದಾಳೆ.

ಕರೋನಾ ಆತಂಕದ ನಂತರ ಯಾವುದೇ ಪರೀಕ್ಷೆಗೆ ಈ ಥರ್ಮೋಮೀಟರ್ ಬಳಸದಂತೆ ಸರ್ಕಾರದ ಆದೇಶವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ. ಕೊನೇಪಕ್ಷ ಈ ಥರ್ಮೋಮೀಟರ್ ಬಳಸುವುವಾಗ ಒಬ್ಬರ ಪರೀಕ್ಷೆಯ ನಂತರ ಸ್ವಲ್ಪ ಹೊತ್ತು ಬಿಸಿನೀರಿನಲ್ಲಿ ಇಟ್ಟು ನಂತರ ಇನ್ನೊಬ್ಬರ ಜ್ವರ ಪರೀಕ್ಷೆ ಮಾಡಬೇಕು ಎಂಬ ನಿಯಮ ಇದೆ, ಅದನ್ನೂ ಪಾಲಿಸದೆ ಬೇಕಾಬಿಟ್ಟಿ ಜ್ವರ ಪರೀಕ್ಷೆ ಮಾಡಿದ್ದಾಳೆ.

ಪುರಸಭೆಯ ಅಧಿಕಾರಿಗೆ ತಿಳಿಸದೆ ಈ ಕೆಲಸ ಮಾಡಿರೋದಕ್ಕೆ ಕಾರಣ ಕೇಳಿ ಇದೀಗ ಮುಖ್ಯಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ. ಇದೀಗ ಈಕೆಯಿಂದ ಪರೀಕ್ಷೆ ಮಾಡಿಸಿಕೊಂಡ ಪೌರಕಾರ್ಮಿಕರು ಮತ್ತೊಮ್ಮೆ ಕರೋನಾ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಎದುರಾಗಿದೆ, ವೀಡಿಯೋ ನೋಡಿ

Watch Video

Previous Post Next Post