ಕರೋನಾ ಸೋಂಕಿತೆಯ ಶವಸಂಸ್ಕಾರಕ್ಕೆ ಎಲ್ಲೆಡೆ ವಿರೋಧ, ನನ್ನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಿ ಎಂದ ಬಿಜೆಪಿ ಶಾಸಕ (ವೀಡಿಯೋ)

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರು ನನ್ನ ಸ್ವಂತ ಜಮೀನಿನಲ್ಲಿ ಮೃತ ಮಹಿಳೆಯ ಅಂತ್ಯಸಂಸ್ಕಾರ ಮಾಡುವಂತೆ ಹೃದಯ ವೈಶಾಲ್ಯತೆ ತೋರಿದ್ದಾರೆ.
ಕೆಲ ದಿನಗಳ ಹಿಂದೆ ಮೃತ ಮಹಿಳೆಯ ಸೊಸೆಯೂ ಇದೇ ಕರೋನಾ ಸೋಂಕಿನಿಂದ ಮೃತರಾಗಿದ್ದು, ಆವಾಗಲೂ ಇದೇ ರೀತಿ ವಿರೋಧಗಳು ವ್ಯಕ್ತವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಹಿಂದೂ ರುದ್ರಭೂಮಿಗಳಿದ್ದು, ಸ್ಥಳೀಯರಷ್ಟೇ ಅಲ್ಲದೆ ಜನ ಪ್ರತಿನಿಧಿಗಳೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ನಿಜಕ್ಕೂ ಬೇಸರದ ಸಂಗತಿ.

ಕೊನೆಗೆ ಬಂಟ್ವಾಳ ತಾಲೂಕಿನ ಕೈಕುಂಜ ಹಿಂದೂ ರುದ್ರಭೂಮಿಯಲ್ಲಿ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ಮಹಿಳೆಯ ಕುಟುಂಬದ ಜೊತೆ ನಿಂತು ಮಾನವೀಯತೆ ಮೆರೆದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ವೀಡಿಯೋ ನೋಡಿ,

Watch Video


Previous Post Next Post