ಲಾಕ್-ಡೌನ್ ಉಲ್ಲಂಘಿಸಿದ್ದೂ ಅಲ್ಲದೆ ಪ್ರಶ್ನಿಸಿದ ಪೋಲೀಸರಿಗೆ ಕಾಲಿನಿಂದ ಒದ್ದ ಯುವತಿ, ವೀಡಿಯೋ ನೋಡಿ


ಕೊರೋನಾ ಸೋಂಕು ಹರಡುವಿಕೆ ತಡೆಯಲು ದೇಶದಾದ್ಯಂತ ಲಾಕ್-ಡೌನ್ ಹೇರಿಕೆಯಾಗಿದೆ. ಜನರು ಲಾಕ್-ಡೌನ್ ಉಲ್ಲಂಘಿಸುವುದನ್ನು ತಡೆಯಲು ದೇಶದಾದ್ಯಂತ ಪೋಲೀಸರು ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೊರೋನಾ ವಾರಿಯರ್ಸ್ ಪೋಲೀಸರ ಮೇಲೆ ಹಲ್ಲೆ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ.

ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಯುವತಿಯರ ವಾಹನ ಸೀಜ್ ಮಾಡಲು ಹೋದ ಪೋಲೀಸರ ಮೇಲೆಯೆ ಯುವತಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಯುವತಿ ಲಾಕ್-ಡೌನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದಿದ್ದೂ ಅಲ್ಲದೆ, ಯಾವುದೇ ರೀತಿಯ ಫೇಸ್ ಮಾಸ್ಕ್ ಹಾಕಿಯೂ ಇರಲಿಲ್ಲ.ತನ್ನ ದ್ವಿಚಕ್ರ ವಾಹನಲ್ಲಿ ರಸ್ತೆಗೆ ಇಳಿದಿದ್ದ ಆಕೆಯಲ್ಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಇರಲಿಲ್ಲ, ವಾಹನಕ್ಕೆ ನಂಬರ್ ಪ್ಲೇಟ್ ಕೂಡ ಅಳವಡಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಪೋಲೀಸರು ವಾಹನದ ಕೀ ಕೊಡುವಂತೆ ಪರಿಪರಿಯಾಗಿ ಕೇಳಿಕೊಂಡರೂ ಆಕೆ ನೀಡದೆ ಪೋಲೀಸರ ಮೇಲೆಯ ರೇಗುತ್ತಿದ್ದಳು. ಕೊನೆಗೆ ಮಹಿಳಾ ಪೋಲೀಸ್ ಬಲವಂತವಾಗಿ ಆಕೆಯ ಕೈಯಿಂದ ಕೀ ಕಿತ್ತುಕೊಳ್ಳಲು ಯತ್ನಿಸಿದ್ದು ಸಾಧ್ಯವಾಗದೆ ಇದ್ದಾಗ ಜೊತೆಯಲ್ಲಿದ್ದ ಪುರುಷ ಪೋಲೀಸ್ ಸಹಾಯಕ್ಕೆ ಧಾವಿಸಿದ್ದಾರೆ. ಆಗ ಯುವತಿ ಆ ಪೋಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾಳೆ.

ಇದೀಗ ತಮ್ಮ ಕರ್ತವ್ಯಕ್ಕೆ ಅಡ್ಡಿ ಮಾಡಿದ ಇಬ್ಬರು ಯುವತಿಯರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ದ್ವಿಚಕ್ರ ವಾಹನ ಸೀಜ್ ಮಾಡಲಾಗಿದೆ. ವೀಡಿಯೋ ನೋಡಿ,

Watch Video


Previous Post Next Post