ಲಾಕ್ ಡೌನ್ ಉಲ್ಲಂಘಿಸಿ ಬೀದಿಗಿಳಿದವರಿಗೆ ಲಾಠಿ ರುಚಿ ತೋರಿಸಿದ ಪೋಲೀಸರು

ಪ್ರಪಂಚದಾದ್ಯಂತ ಮಾರಕವಾಗಿ ಹರಡಿರುವ ಕೊರೋನ ವೈರಸ್ ಸೋಂಕಿಗೆ ಇದುವರೆಗೆ 19000 ಜನರು ಸಾವಿಗೀಡಾಗಿದ್ದರೆ, 3ಲಕ್ಷಕ್ಕೂ ಹೆಚ್ಚು ಜನ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾರೆ. ಭಾರತದಲ್ಲಿಯೂ ಕೊರೋನ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, 500ಕ್ಕೂ ಹೆಚ್ಚು ಜನ ಈಗಾಗಲೇ ಕೊರೋನ ಸೋಂಕಿಗೆ ಒಳಗಾಗಿದ್ದಾರೆ ಅಲ್ಲದೆ 11 ಜನ ಸಾವಿಗೀಡಾಗಿದ್ದಾರೆ.

ಕೊರೋನ ಸೋಂಕು ಇನ್ನಷ್ಟು ಹರಡುವುದನ್ನು ತಡೆಯಲು ಭಾರತ ಸರ್ಕಾರ ಮಾರ್ಚ್ 25ರಿಂದ 21ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಿದೆ. ಕೊರೋನ ಹರಡುವುದನ್ನು ತಡೆಯಲು ಸರ್ಕಾರ ಇಷ್ಟೆಲ್ಲ ಕಷ್ಟ ಪಡುತ್ತಿದ್ದರು ಜನ ಮಾತ್ರ ಕೊರೋನ ಮಾರಿಯ ಬಗ್ಗೆ ಭಯ ಹೊಂದಿಲ್ಲ. ಲಾಕ್ ಡೌನ್ ಉಲ್ಲಂಘಿಸಿ ಸುತ್ತಾಡಲು ಬಂದ ಯುವಕರಿಗೆ ಪೊಲೀಸರು ಯಾವ ರೀತಿ ಲಾಠಿ ರುಚಿ ತೋರಿಸಿದ್ದಾರೆ ನೋಡಿ.

Previous Post Next Post