ರಾಜ್ಯದಲ್ಲಿ ಕೊರೋನಾ ಭೀತಿಯಿಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೊರೋನ ವೈರಸ್ ತಗುಲಿದೆ ಎಂದು ಭೀತಿಯಿಂದ ವ್ಯಕ್ತಿಯೋರ್ವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಗೋಪಾಲಕೃಷ್ಣ ಮಡಿವಾಳ (56) ಎಂದು ಗುರುತಿಸಲಾಗಿದೆ.

 ಕೆಎಸ್ಸಾರ್ಟಿಸಿ ಬಸ್ ನ ಟ್ರೈನರ್ ಆಗಿದ್ದ ಗೋಪಾಲಕೃಷ್ಣ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ತನ್ನ ಸ್ನೇಹಿತನಿಗೆ ಕೊರೊನಾ ಲಕ್ಷಣ ಕಂಡುಬಂದಿದೆ ಎಂದು ಮನೆಯವರಲ್ಲಿ ಹೇಳಿಕೊಂಡಿದ್ದರು. ಡೆತ್ ನೋಟ್ ನಲ್ಲಿ ನನಗೆ ಕೊರೊನಾ ತಗುಲಿರಬಹುದು ಎಂದು ಬರೆದಿಟ್ಟಿದ್ದರು. ಆದರೆ ಇವರಿಗೆ ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ ಕೇವಲ ಕೊರೋನಾ ಭೀತಿಯಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
Previous Post Next Post