ಬೆಂಗಳೂರಿನಲ್ಲಿ ಎಂಜಲು ಉಗುಳಿ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿ, ವೀಡಿಯೋ ವೈರಲ್

ದೇಶದಾದ್ಯಂತ ಕೊರೋನಾ ಸೋಂಕು ತಾಂಡವವಾಡುತ್ತಿರುವ ಹೊತ್ತಲ್ಲೇ ಆಹಾರ ಪದಾರ್ಥಗಳ ಮೇಲೆ ಎಂಜಲು ಹಚ್ಚಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ತಿಂಗಳಲ್ಲೇ ಇಂತಹ ಹತ್ತಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಕೆಲವು ಕಡೆ ಆರೋಪಿಗಳ ಬಂಧನವೂ ಆಗಿದೆ.
ಇದೀಗ ಬೆಂಗಳೂರಿನಲ್ಲಿ ಇಂತಹದೇ ಪ್ರಕರಣ ನಡೆದಿರೋದು ಬೆಳಕಿಗೆ ಬಂದಿದೆ. ನಗರ ಸಾರಕ್ಕಿ 9ನೇ ಅಡ್ಡ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಿಯೊಬ್ಬ ಎಂಜಲು ಉಗುಳಿ ಹಣ್ಣು ವ್ಯಾಪಾರ ಮಾಡಿದ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದಾರೆ.

ಆತ ಎಂಜಲು ಉಗುಳಿರೋದನ್ನ ಕಂಡ ಪ್ರತ್ಯಕ್ಷದರ್ಶಿಗಳು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಆತ ಅವರಲ್ಲಿ ಕ್ಷಮೆ ಕೇಳಿ, ಇನ್ನೊಮ್ಮೆ ಇಂತಹ ಕೆಲಸ ಮಾಡುವುದಿಲ್ಲ ಎಂದು ಕೇಳಿಕೊಂಡಿದ್ದಾನೆ.

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ರಸ್ತೆಬದಿ ಆಹಾರ ಪದಾರ್ಥ ಖರೀದಿಸಲೂ ಭಯಪಡುವ ಸ್ಥಿತಿ ಎದುರಾಗಿದೆ. ವೀಡಿಯೋ ಇಲ್ಲಿದೆ ನೋಡಿ,

Watch Video

أحدث أقدم