ಒಬ್ಬಟ್ಟು ತರಲು ಲಾಕ್ ಡೌನ್ ಮಧ್ಯೆಯೆ ಅಜ್ಜಿಮನೆಗೆ ತೆರಳಿದ ಯುವಕ, ವೀಡಿಯೋ ವೈರಲ್


ಅಜ್ಜಿ ಒಬ್ಬಟ್ಟು ಕೊಡ್ತೀನಿ ಬಾ ಎಂದು ಹೇಳಿದ್ದರು. ಅದಕ್ಕೆ ಹೋಗಿದ್ದೆ ಅಂತ ಬೆಂಗಳೂರಿನ ವಿಜಯನಗರದಲ್ಲಿ ಯುವಕನೊಬ್ಬ ಬಾಕ್ಸ್ ತೆರೆದು ಪೊಲೀಸರ ಬಳಿ ತೋರಿಸಿದ್ದಾನೆ. ಆದರೆ ಬಾಕ್ಸಿನಲ್ಲಿ ಒಂದೇ ಒಂದು ಒಬ್ಬಟ್ಟು ಕಂಡ ಪೊಲೀಸರೇ ಗಲಿಬಿಲಿಯಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ಒಂದು ಒಬ್ಬಟ್ಟು ತರೋಕೆ ಕಾರು ತಗೊಂಡು ಅಜ್ಜಿ ಮನೆಗೆ ಹೋಗಿದ್ದೀಯಾ ಎಂದು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
Previous Post Next Post