ಮಸೀದಿಯಲ್ಲಿ ವಿದೇಶಿ ತಬ್ಲಿಘಿಗಳನ್ನು ಬಚ್ಚಿಟ್ಟವರಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಹೀಂ ಉಚ್ಚಿಲ, ವೀಡಿಯೋ ನೋಡಿ

ಪಾದರಾಯನಪುರಕ್ಕೆ ವಿದೇಶಿ ತಬ್ಲಿಘಿಗಳ ನಂಟಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಪಾಸ್‍ಪೋರ್ಟ್ ಅವಧಿ ಮುಗಿದ ಇಂಡೋನೇಷ್ಯಾ ಮತ್ತು ಕಿರ್ಗಿಸ್ಥಾನದ 19 ಮಂದಿಗೆ ಆಶ್ರಯ ನೀಡಲಾಗಿತ್ತು. ಈ ವಿಚಾರ ಶಾಸಕ ಜಮೀರ್ ಅಹ್ಮದ್ ಮತ್ತು ಕಾರ್ಪೋರೇಟರ್ ಇಮ್ರಾನ್ ಪಾಶಾಗೆ ಗೊತ್ತಿದ್ದರೂ ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದೀಗ ಈ ಬಗ್ಗೆ ಮಾತನಾಡಿರುವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕ ರಹೀಂ ಉಚ್ಚಿಲ, ತಬ್ಲಿಘಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಕ್ವಾರಂಟೈನ್ ಗೆ ಒಳಗಾಗದೆ ಬಚ್ಚಿಟ್ಟುಕೊಂಡಿರುವ 350ಕ್ಕೂ ತಬ್ಲಿಘಿಗಳಲ್ಲಿ 19ಜನ ಪಾದರಾಯನಪುರದಲ್ಲಿ ಪತ್ತೆಯಾಗಿದ್ದಾರೆ. ಇನ್ನುಳಿದವರು ಎಲ್ಲಿ ಅಡಗಿದ್ದಾರೆ ಎಂಬುದು ತಬ್ಲಿಘಿ ನಾಯಕರಿಗೆ ಹಾಗೂ ಜಮೀರ್ ಅಹ್ಮದ್ ಖಾನ್ ಗೆ ಗೊತ್ತಿರುತ್ತೆ. ಆದಷ್ಟು ಬೇಗ ಅವರ ಮಾಹಿತಿ ನೀಡಿ ಎಂದಿದ್ದಾರೆ. ಮಸೀದಿಯಲ್ಲಿ ವಿದೇಶಿ ತಬ್ಲಿಘಿಗಳನ್ನು ಬಚ್ಚಿಟ್ಟವರಿಗೆ ಹಿಗ್ಗಾಮುಗ್ಗಾ ಜಾಡಿಸಿದ ರಹೀಂ ಉಚ್ಚಿಲ, ವೀಡಿಯೋ ನೋಡಿ

Watch Video

Previous Post Next Post